ಕನ್ನಡ ಸಾಹಿತ್ಯ ಲೋಕದಲ್ಲಿ ಸಲಿಂಗಿಗಳ ಬಗ್ಗೆ ಪರಿಚಯಿಸುವ ಮೂಲಕ ಹೊರಬಂದ ಮೋಹನಸ್ವಾಮಿ ಕೃತಿಯು ಲೇಖಕರ ಆತ್ಮಕತೆಯೂ ಹೌದು. " 'ಮೋಹನಸ್ವಾಮಿ' ಹನ್ನೊಂದು ಸಣ್ಣ ಕಥೆಗಳು ಹಾಗು ಒಂದು ಪದ್ಯವನ್ನೊಳಗೊಂಡಿದೆ. ಅದರಲ್ಲಿ ಆರು ಕಥೆಗಳು ಮೋಹನಸ್ವಾಮಿಯ ಕುರಿತಾಗಿದ್ದು ಮಿಕ್ಕವು ಬೇರೆ ಪಾತ್ರಗಳನ್ನು ನಿರೂಪಿಸುತ್ತವೆ. 'ತುತ್ತತುದಿಯಲ್ಲಿ ಮೊಟ್ಟಮೊದಲು' ಮೋಹನಸ್ವಾಮಿಯ ಪರಿಚಯಾತ್ಮಕ ಕಥೆಯಾಗಿದ್ದು ಲಿಂಗ ಬದಲಾವಣೆಯ ನಂತರದ ಸಾಮಾಜಿಕ ಜೀವನದಲ್ಲಿ ತನ್ನ ಸತತ ನೋವಿನ ಸೆಲೆಯನ್ನು, ಅಪರಾಧಿ ಮನೋಭಾವನೆಯನ್ನು ಮುಂದಿಡುತ್ತದೆ. 'ಕಗ್ಗಂಟು' ಮೋಹನಸ್ವಾಮಿಯು ತನ್ನ ಪ್ರೇಯಸಿಯನ್ನು ಕಳೆದುಕೊಳ್ಳುವ ಹಾಗು ಒಂದು ಹುಡುಗಿಯ ಒಡನಾಟದ ಕುರಿತಾದ ಕತೆಯಿದೆ.