ಪ್ರಮುಖ ಕಾದಂಬರಿಕಾರ, ಚಿಂತಕರಾದ ಎಸ್.ಎಲ್. ಭೈರಪ್ಪನವರ 'ಅಂಚು' ಕಾದಂಬರಿಯು 1990ರಲ್ಲಿ ರಚನೆಯಾಗಿದೆ. ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ಧ ತೂಕವನ್ನು ಸೃಷ್ಟಿಸುತ್ತದೆ. ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಫುಟವಾಗಿ ನಿಲ್ಲುವ ಪಾತ್ರಗಳು, ಮಾನವ ಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರವಿಶ್ಲೇಷಣೆಗಳಿಂದ ಬೈರಪ್ಪನವರು ಈ ಕಾದಂಬರಿಯಲ್ಲಿ ಹೊಸ ದ್ರವ್ಯ ಹಾಗೂ ವಿಧಾನಗಳನ್ನು ಆವಿಷ್ಕರಿಸಿದ್ದಾರೆ. ಕಾದಂಬರಿಯಲ್ಲಿ ಎರಡು ಪಾತ್ರಗಳು ವಿವಿಧ ಸಂಧರ್ಭಗಳಲ್ಲಿ ಅನುಭವಿಸುವ ಮಾನಸಿಕ ಎರುಪೇರುಗಳನ್ನು, ಭಾವನತ್ಮಕ ಹೋರಾಟವನ್ನು, ನೈತಿಕ ಯುದ್ದವನ್ನು ಕಾದಂಬರಿಯು ಬಹುಮುಖ್ಯವಾಗಿ ಕಟ್ಟಿಕೊಡುತ್ತದೆ. ಇದರ ಜೊತೆಗೆ ಕಾದಂಬರಿಯ ಅನೇಕ ಕಡೆಗಳಲ್ಲಿ ಮೈಸೂರಿನ ಸುಂದರ ಚಿತ್ರಣವನ್ನು ಕಾದಂಬರಿ ಬಿಚ್ಚಿಡುತ್ತದೆ.