'ಈಸಾಡತಾವ ಜೀವಾ' ಲೇಖಕ ಶ್ರೀಧರ ಬಳಗಾರ ಅವರ ಕಥಾಸಂಕಲನ. ದಟ್ಟವಾದ ವಿವರಗಳು ಸನ್ನಿವೇಶಗಳನ್ನೂ, ಪಾತ್ರಗಳನ್ನೂ ಅಧಿಕೃತವಾಗಿ ಚಿತ್ರಿಸುವ ಬಳಗಾರರು ತಾವು ಕಟ್ಟಿಕೊಡುವ ಜೀವನಸಂದರ್ಭಗಳ ಮೂಲಕ ಸಮಕಾಲೀನ ನಾಗರೀಕತೆಯ ಸ್ವರೂಪವನ್ನೂ ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕತೆಗಳನ್ನು ರಚಿಸಿದ್ದಾರೆ. ಸೂಕ್ಷ್ಮದಿಂದ ಸ್ತೂಲವನ್ನು, ಸ್ಥಳೀಯವಾದುದರಿಂದ ವಿಶ್ವಾತ್ಮಕವಾದುದನ್ನು ಮುಟ್ಟ ಬಯಸುವ ಇಲ್ಲಿನ ಕತೆಗಳು ಸಮಕಾಲೀನ ಕಥಾಸಾಹಿತ್ಯಕ್ಕೆ ಗುಣಾತ್ಮಕ ಸೇರ್ಪಡೆಗಳಾಗಿವೆ