ಕುಂ.ವೀ. ಅವರ ಕಾದಂಬರಿ. ಈ ಕೃತಿಯ ಕುರಿತು ಲೇಖಕ-ಪತ್ರಕರ್ತ ಜಿ.ಎನ್. ಮೋಹನ್ ಅವರು 'ಕನ್ನಡ ಸಾಹಿತ್ಯ ಲೋಕ ಕಾಣದ ಒಂದು ಜಗತ್ತು ಕುಂವೀ ಬರಹಗಳಲ್ಲಿದೆ. ಕುಂವೀ ಅವರು ನನಗೆ ಮುಖ್ಯವಾಗುವುದು ಅವರು ನಮ್ಮ ಮುಂದೆ ಇಡುತ್ತಿರುವ ಭಾರತ ಯಾವುದು ಎನ್ನುವ ಕಾರಣಕ್ಕಾಗಿ ಸಹಾ, ಒಂದು ಅರ್ಥದಲ್ಲಿ ಇವರು ಕನ್ನಡ ಸಾಹಿತ್ಯಲೋಕದ ಪಿ. ಸಾಯಿನಾಥ್ ಅಧೋ ಜಗತ್ತಿನ ಆಕಾವ್ಯವನ್ನು ಮುಂದಿಡಲು ಪಿ ಸಾಯಿನಾಥ್ ಪತ್ರಿಕೋದ್ಯಮವನ್ನು ಪ್ರವೇಶಿಸಿದರೆ, ಕುಂವೀ ಸಾಹಿತ್ಯವನ್ನು ಆಶ್ರಯಿಸಿದ್ದಾರೆ. "ಎಂಟರ್ ರ ಡ್ರಾಗನ್' ನನ್ನೊಳಗೆ ಮತ್ತೊಮ್ಮೆ ನಾವು ಕಾಣುವ ಜಗತ್ತಿನ ದರ್ಶನ ಮಾಡಿಸುತ್ತಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.