ಸಣ್ಣ ಪಠ್ಯವನ್ನು ಹಿಗ್ಗಿಸಲು, ವಸ್ತುವಿನ ವಿವರಗಳನ್ನು ನೋಡಲು ಅಥವಾ ರಸ್ತೆಯ ಚಿಹ್ನೆಗಳು ಅಥವಾ ಸೇವಾ ಕೌಂಟರ್‌ನ ಹಿಂದಿರುವ ರೆಸ್ಟೋರೆಂಟ್ ಮೆನುಗಳಂತಹ ದೂರದ ಪಠ್ಯವನ್ನು ಝೂಮ್ ಇನ್ ಮಾಡಲು ನಿಮ್ಮ ಕ್ಯಾಮರಾವನ್ನು ಬಳಸಿ. ಮೆನು, ನಿರ್ಗಮನ ಬೋರ್ಡ್, ಅಥವಾ ಪಠ್ಯವನ್ನು ಒಳಗೊಂಡಿರುವ ಯಾವುದರಲ್ಲದಾರೂ ನಿಮಗೆ ಬೇಕಾದುದನ್ನು ಹುಡುಕಲು, ನೀವು ತೆಗೆದುಕೊಳ್ಳುವ ಚಿತ್ರಗಳಲ್ಲಿ ಪದಗಳನ್ನು ಹುಡುಕಿ. ಕಡಿಮೆ ಕಾಂಟ್ರ್ಯಾಸ್ಟ್ ಪಠ್ಯವನ್ನು ಹೆಚ್ಚು ಗೋಚರಿಸುವಂತೆ ಮಾಡಲು ವಿಷುವಲ್ ಎಫೆಕ್ಟ್‌ಗಳನ್ನು ಅನ್ವಯಿಸಿ. ಕಡಿಮೆ ಬೆಳಕಿರುವ ಪರಿಸರದಲ್ಲಿ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಅಡ್ಜಸ್ಟ್ ಆಗುತ್ತದೆ. ನಿಮಗೆ ಅಗತ್ಯವಿರುವಷ್ಟು ನೀವು ಫೋಟೋಗಳನ್ನು ತೆಗೆದುಕೊಳ್ಳಬಹುದು ಮತ್ತು ಝೂಮ್ ಇನ್ ಮಾಡಬಹುದು.
ಪ್ರಾರಂಭಿಸಿ:
1. Play Store ನಿಂದ ಮ್ಯಾಗ್ನಿಫೈಯರ್ ಅನ್ನು ಡೌನ್‌ಲೋಡ್ ಮಾಡಿ.
2. (ಐಚ್ಛಿಕ) ಕ್ವಿಕ್ ಟ್ಯಾಪ್ ಮೂಲಕ ಸುಲಭವಾಗಿ ತೆರೆಯುವಂತೆ ಮ್ಯಾಗ್ನಿಫೈಯರ್ ಅನ್ನು ಸೆಟಪ್ ಮಾಡಿ:
a. ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳು ಆ್ಯಪ್ ತೆರೆಯಿರಿ.
b. ಸಿಸ್ಟಂ > ಗೆಸ್ಚರ್‌ಗಳು > ಕ್ವಿಕ್ ಟ್ಯಾಪ್ ಎಂಬುದಕ್ಕೆ ಹೋಗಿ.
c. ಕ್ವಿಕ್ ಟ್ಯಾಪ್ ಬಳಸಿ ಎಂಬುದನ್ನು ಆನ್ ಮಾಡಿ.
d. ಆ್ಯಪ್ ತೆರೆಯಿರಿ ಎಂಬುದನ್ನು ಆಯ್ಕೆಮಾಡಿ. "ಆ್ಯಪ್ ತೆರೆಯಿರಿ" ಎಂಬುದರ ಮುಂದಿರುವ ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ. ನಂತರ ಮ್ಯಾಗ್ನಿಫೈಯರ್ ಅನ್ನು ಆಯ್ಕೆಮಾಡಿ.
e. ಮ್ಯಾಗ್ನಿಫೈಯರ್ ಅನ್ನು ತೆರೆಯಲು, ನಿಮ್ಮ ಫೋನ್‌ನ ಹಿಂಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಿ.
ಮ್ಯಾಗ್ನಿಫೈಯರ್‌ಗೆ Pixel 5 ಅಥವಾ ನಂತರದ ಮಾಡೆಲ್‌ನ ಅಗತ್ಯವಿದೆ.
ಅಪ್‌ಡೇಟ್ ದಿನಾಂಕ
ನವೆಂ 18, 2024